ಶುಕ್ರವಾರ, ಜೂನ್ 12, 2015

ಕೂದಲುದುರುವ ಮುನ್ನ…!

ಕೂದಲುದುರುವ ಮುನ್ನ…!
ಎಲ್ಲರೂ ದಿನಕ್ಕೊಂದು ಯೋಚನೆ (Thought for the day) ಅಂತ ಹೇಳೋದು ಕಾಮನ್ ಆಗಿಬಿಟ್ಟಿದೆ.  ಅದುಕ್ಕೆ ಹೆಡ್ಡಿಂಗ್ ಸ್ವಲ್ಪ ಡಿಫರೆಂಟ್ ಆಗಿ ಇರಲಿ, ಜೊತೆಗೆ creativity ನೂ ಇರಲಿ ಅಂತ ನಾನು ಈ ಹೆಡ್ಡಿಂಗ್ ಬರೆದಿದ್ದೇನೆ.  ಹೇಗಿದೆ?
ಈ ಹೆಡ್ಡೀಗಿನ ವಿಶೇಷ ಏನಂದ್ರೆ, ಪ್ರತೀ ಟ್ಯಾಬ್ಲೆಟ್ (ಮಾತ್ರೆ / ವಿಷಯ) ನಿಮ್ಮ ತಲೆಗೇ ನಾನು ಈ ಮೂಲಕ ತುರುಕಿದ ತಕ್ಷಣ ನಿಮ್ಮ ಕೈ ಅನಾಯಾಸವಾಗಿ ನಿಮ್ಮ ತಲೆ ಮೇಲೆ ಹೋಗುತ್ತೇ… ಬೆರಳು ತಲೆಯ ನಿರ್ದಿಷ್ಟ ಭಾಗವನ್ನ ನಾಲ್ಕೈದು ಭಾರಿ ಕೆರೆಯುತ್ತೆ. ಕೂದುಲು ಉದುರುತ್ತೆ. ಇದಕ್ಕೆ ಒಂದು ಅಪವಾದ ಎಂದರೇ ಕೆಲವರಿಗ ಹೀಗೆ ಆಗಲ್ಲ..! ಯಾರಿಗೇಂತಾ ಗೊತ್ತಾಗಲ್ವ..? ಯಾರು ಮೊದಲೇ ಬಕ್ಕ ತಲೆಯವರಿರುತ್ತಾರೋ ಅವರಿಗೆ..! ನೋಡಿ ಈಗ್ಲೇ ನಿಮ್ಮ ಕೈ ಕಡೀತಿದೇ, ತಲೇಕಡೇ ಕೆರಿಯಕ್ಕೆ ಹೋಗ್ತಿದೇ.. ಆದ್ರೂ ನೀವು ಅದುನ್ನ ತಡಿಯಲು ಸಫಲರಾಗಿಬಿಟ್ರೀ… ಆದ್ರೆ ಇನ್ಮುಂದೆ ಹಂಗಾಗಂಗಿಲ್ಲ… ಸರೀನಾ..?

ಆದ್ರೆ ಇದರಲ್ಲಿ ಬರೀ ತಲೆ ಕೆರ್ಕಳೋ ವಿಷ್ಯ ಇದೇ ಅಂತಾ ತಿಳ್ಕೋಬೇಡಿ,,,, ಕೆಲ್ವು ತಿಳ್ಕಳೋ ವಿಷಯಾನೂ ಇರುತ್ತೆ.  ಯಾವುದು ತಿಳ್ಕಳದು, ಯಾವುದು ಕೆರ್ಕಳದು ಅಂತಾ ನಿರ್ದಾರ ಮಾಡೋದು ನಿಮ್ಮ ಮಂಡೀಗೆ ಬಿಟ್ಟ ವಿಷಯ.

1 ಕಾಮೆಂಟ್‌: